Aadhaar not mandatory for bank account, mobile number but must for ITR filing says Supreme Court. But Supreme court's decision made Modi Govt get shocked.
ದೇಶದಲ್ಲಿ ಬಹು ಚರ್ಚಿತ ವಿಷಯವಾಗಿದ್ದ ಆಧಾರ್ ಕಡ್ಡಾಯಕ್ಕೆ ಸುಪ್ರೀಂ ಕೋರ್ಡ್ ತಡೆ ನೀಡಿದೆ. ವಿಶಿಷ್ಟ ಗುರುತಿನ ಸಂಖ್ಯೆ(ಆಧಾರ್)ಯ ಸಾಂವಿಧಾನಿಕ ಮಾನ್ಯತೆ ಕುರಿತು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ತೀರ್ಪು ಪ್ರಕಟಿಸಿದ್ದು, ಬ್ಯಾಂಕ್ ಆಕೌಂಟ್, ಸಿಮ್ ಕಾರ್ಡ್, ಪ್ಯಾನ್ ಕಾರ್ಡ್‌ಗಳಿಗೆ ಆಧಾರ್ ಕಡ್ಡಾಯ ಮಾಡುವಂತೆ ಇಲ್ಲ ಎಂದು ತಿಳಿಸಿದೆ. ಈ ಹಿನ್ನಲೆಯಲ್ಲಿ ಇನ್ನು ಮುಂದೆ ಯಾವುದೇ ಸೇವೆಗಳಿಗೆ ಆಧಾರ್ ಅನ್ನು ಕಡ್ಡಾಯ ಮಾಡುವಂತೆ ಇಲ್ಲ ಎನ್ನಲಾಗಿದೆ. ಈ ಮೂಲಕ ಕೇಂದ್ರ ಸರಕಾರದ ಮಹತ್ವದ ಆಧಾರ್ ಕಡ್ಡಾಯ ಯೋಜನೆಗೆ ಹೊಡೆತ ಬಿದ್ದಂತೆ ಆಗಿದೆ.